kumta taaluka ekavi udgatana samaarambha
ekavi kumta kaaraykrama_Dec 4th 2010
'ಸಾಹಿತ್ಯ-ಸಂವಾದ' - ಅಂತರಜಾಲದಲ್ಲಿ ಸಾಹಿತ್ಯ ಕೃಷಿ - ಸಾಂಸ್ಕೃತಿಕ ಕಾರ್ಯಕ್ರಮ
ಅಧ್ಯಕ್ಷತೆಯಲ್ಲಿ,
ಶ್ರೀ ಬಿ. ಎ. ಸನದಿ
ಸಂಪನ್ಮೂಲ ವ್ಯಕ್ತಿಗಳಾಗಿ
ಡಾ. ಜಿ.ಎಲ್.ಹೆಗಡೆ , ಡಾ. ಮಹೇಶ್ ಅಢ್ಕೊಳ್ಳಿ, ಶ್ರೀ ಸುಬ್ರಾಯ್ ಮತ್ತೀಹಳ್ಳಿ,
ಶ್ರೀ ಆರ್. ಡಿ. ಹೆಗಡೆ. ಆಲ್ಮನೆ.
ಸಾಹಿತ್ಯ-ಸಂವಾದ
ಕೃಷ್ಣ ಮೂತರ್ಿ ಹೆಬ್ಬಾರ , ಎಂ.ಜಿ. ನಾಯ್ಕ, ಕುಮಟಾ. , ಮಂಜುನಾಥ ಗಾಂವ್ಕರ್ ಬಗರ್ಿ,
ವನ್ನಳ್ಳಿ ಗಿರೀಶ್., ದತ್ತಗುರು ಕಂಠಿ ಶಿರಸಿ , ಎನ್. ವಿ ಮಂಜುನಾಥ ಶಿರಸಿ, ದಿನೇಶ ಚಂದ್ರ ಕುಮಟಾ. ,
ಪ್ರಕಾಶ ಭಾಗ್ವತ್ ಶಿರಸಿ , ಗಣೇಶ ಹೊಸ್ಮನೆ ಶಿರಸಿ., ಸಂಜಯ್ ಭಟ್ ಬೆಣ್ಣೆ ಶಿರಸಿ, ಶಿವರಾಮ ಹೆಗಡೆ ಕುಮಟಾ,
ನವೀನ್ ಭಟ್ ಗಂಗೊತ್ರಿ ಶೃಂಗೇರಿ, ವಿಶ್ವನಾಥ ಸುಂಕಸಾಳ ಶೃಂಗೇರಿ., ಎನ್ ಆರ್ ಹೆಗಡೆ ಅಂಕೋಲಾ. ,
ವಿನಯಕ ಹೆಗಡೆ ಭದ್ರನ್ ಕುಮಟಾ , ರಾಘವೇಂದ್ರ ಭಟ್ ಕಡತೋಕಾ. , ದಿನೇಶ ಭಟ್ ಕುಮಟಾ.,
ಶ್ರಿಮತಿ ಎಂ.ಕೆ ಲಕ್ಷ್ಮಿ. ಕುಮಟಾ, ಶ್ರೀಮತಿ ಸುಧಾ ಕಕರ್ಿಸವಲು ಸಿದ್ಧಾಪುರ., ಶ್ರೀಮತಿ ಸುಜಾತಾ ದಂಟ್ಕಲ್ ಸಿದ್ಧಾಪುರ.,
ಶ್ರೀಮತಿ ಸಂಧ್ಯಾ ಭಟ್ ಕೂಜಳ್ಳಿ. , ಶ್ರೀಮತಿ ಕಮಲಾ ಕೊಂಡದಕುಳಿ. ಕುಮಟಾ,
ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
1. ಶ್ರೀ ವಿಶ್ವೇಶ್ವರ ಹೆಗಡೆ ಯವರಿಂದ ಭರತನಾಟ್ಯ...,
2. ಕುಮಾರಿ ಪೂರ್ವಿತಾ, ಕುಮಾರಿ ಪ್ರಜ್ಞಾ, ಕುಮಾರಿ ಪೂಜಾ ಇವರಿಂದ ಪುಷ್ಪಾಂಜಲಿ..
3. ಭಾರತೀ ಕಲಾಕೇಂದ್ರದ ವಿದ್ಯಾರ್ಥಿನಿಯರಿಂದ ಭರತನಾಟ್ಯ.
4. ಕ್ರೀರಾಭ್ಧಿಕನ್ನಿಕೆ ಶ್ರೀ ಮಹಾಲಕ್ಷ್ಮಿ .... ಹಾಡಿಗೆ ಹೆಜ್ಜೆ ಹಾಕಿದ ಪುಟಾಣಿಗಳು..
5. ಕುಮಾರಿ ಪೂರ್ವಿತಾ ಮತ್ತು ಕುಮಾರಿ ಪೂಜಾ,
6. ಕಾರ್ಯಕ್ರಮವನ್ನು ಅಂದವಾಗಿ ನಿರೂಪಿಸಿದ ಶ್ರೀ ರಾಘವೇಂದ್ರ ಭಟ್ ಇವರಿಗೆ ಶ್ರೀ ಎಂ. ಆಯ್ ಭಟ್ ರಿಂದ ಗೌರವಾರ್ಪಣೆ.
7. ಕಾರ್ಯಕ್ರಮ ನಿರ್ವಹಣೆಯಲ್ಲಿ ಸಂಪೂರ್ಣ ಸಹಕಾರವಿತ್ತ ಶ್ರೀ ದಿನೇಶ್ ಭಟ್ಟರವರಿಗೆ ವಂದನಾರ್ಪಣೆ.
8. ಸಂಗೀತ ಕಾರ್ಯಕ್ರಮ. ಕುಮಾರ್ ಪ್ರವೀಣ್ ಹೆಬ್ಳೆಮನೆ., ತಬಲಾ ಶ್ರೀ ರವಿ ಭಂಡಾರಿ, ಪಿಯಾನೋ ಶ್ರೀಮತಿ ಸಾವಿತ್ರಿ ಮಧ್ಯಸ್ಥ. ತಂಬೂರಿ ಸಾಥ್ ಕುಮಾರಿ ಶ್ವೇತಾ.
9. ಕುಮಾರಿ ಅನೂಜ್ಞಾ.ಳಿಂದ ಗಾಯನ
10. ಕುಮಾರಿ ಅನೂಜ್ಞಾ., ತಬಲಾ ಶ್ರೀ ರವಿ ಭಂಡಾರಿ, ಪಿಯಾನೋ ಶ್ರೀಮತಿ ಸಾವಿತ್ರಿ ಮಧ್ಯಸ್ಥ. ತಂಬೂರಿ ಸಾಥ್ ಕುಮಾರಿ ಶ್ವೇತಾ.
11. ಕುಮಾರಿ ಸುಷ್ಮಾ ಮಕ್ಕಿಕೇರಿ., ತಬಲಾ ಶ್ರೀ ರವಿ ಭಂಡಾರಿ, ಪಿಯಾನೋ ಶ್ರೀಮತಿ ಸಾವಿತ್ರಿ ಮಧ್ಯಸ್ಥ. ತಂಬೂರಿ ಸಾಥ್ ಕುಮಾರಿ ಶ್ವೇತಾ.
12. ಕುಮಾರಿ ಶ್ವೇತಾ ಳಿಂದ ಭಾವಗೀತೆ..
13. ಕುಮಾರಿ ಐಶ್ವರ್ಯಳಿಂದ ಭಕ್ತಿಗೀತೆ..
14. ಶ್ರೀಮತಿ ವಿಜಯಾ ರಿಂದ ಭಕ್ತಿಗೀತೆ....
15. ಶ್ರೀಮತಿ ವಿಜಯಾರಿಂದ ಗಾಯನ., ತಬಲಾ ಶ್ರೀ ರವಿ ಭಂಡಾರಿ, ಪಿಯಾನೋ ಶ್ರೀಮತಿ ಸಾವಿತ್ರಿ ಮಧ್ಯಸ್ಥ.
16. ಕುಮಾರಿ ಭಾಗ್ಯಶ್ರೀ ಮಧ್ತಸ್ಥಳಿಂದ ಭಕ್ತಿಗೀತೆ..
17. ಶ್ರೀಮತಿ ಸಾವಿತ್ರಿ ಮಧ್ಯಸ್ಥ ರಿಂದ ಗಾಯನ....
18. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ.
19. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಶ್ವೇತಾಳಿಗೆ..
20. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಸುಷ್ಮಾಳಿಗೆ..
21. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಐಶ್ವರ್ಯಳಿಗೆ...
22. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಶ್ರೀಮತಿ ವಿಜಯಾ ರಿಗೆ.
23. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಶ್ರೀಮತಿ ಸಾವಿತ್ರಿ ಯವರಿಗೆ
24. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಭಾಗ್ಯಶ್ರೀ ಗೆ..
25. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ತಬಲಾ ಸಾಥ್ ನೀಡಿದ ಶ್ರೀ ರವಿ ಭಂಡಾರಿಯವರಿಗೆ...
26. ಕೋಲಾಟ... ಕಲ್ಲಬ್ಬೆಯ ಶಾಲಾ ಮಕ್ಕಳಿಂದ.
27. ಕಲ್ಲಬ್ಬೆ ಈ ಕವಿ ಶಾಲಾ ಮಕ್ಕಳಿಂದ ಜಾನಪದ ಕೋಲಾಟ..
28. ವಿಶ್ವೇಶ್ವರ ಹೆಗಡೆ ಯವರ ನಾಟ್ಯದ ವಿವಿಧ ಭಂಗಿಗಳು.
29. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಶ್ರೀ ವಿಶ್ವೇಶ್ವರ ಹೆಗಡೆಯವರಿಗೆ.
30. ಕುಮಾರಿ ಪೂಜಾ ಮತ್ತು ಕುಮಾರಿ ಪೂರ್ವಿತಾ ಇವರಿಂದ ಡೋಲಾರೆ ಡೋಲಾ ಹಾಡಿಗೆ ಹೆಜ್ಜೆ....
31. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಪ್ರಜ್ಞಳಿಗೆ...
32. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಪೂಜಾಳಿಗೆ...
33. ಶ್ರೀ ಆಯ್. ಪಿ. ಭಟ್ ರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ನೀಡಿದವರಿಗೆ ನೆನಪಿನ ಕಾಣಿಕೆ. ಕುಮಾರಿ ಪೂರ್ವಿತಾಳಿಗೆ....
kumta taaluka ekavi udgatana samaarambha
http://picasaweb.google.com/bmsceiaa/KumtaTaalukaEkaviUdgatanaSamaarambha#
++++++++++++++++++++++++++++++++++++++++++++++++++++++++++++++++++++++
ಹೊಸ ಚಿಂತನೆ ಹುಟ್ಟು ಹಾಕಿದ 'ಸಾಹಿತ್ಯ-ಸಂವಾದ'
ಎನ್.ಆರ್.ಗಜು, ಕುಮಟಾ
ಕುಮಟಾ ಪಟ್ಟಣದಿಂದ ಹತ್ತು ಕಿಲೋಮೀಟರ ದೂರದಲ್ಲಿರುವ ಹಳ್ಳಿ ಕಲ್ಲಬ್ಬೆಯಲ್ಲಿ ಹೊಸ ತಲೆಮಾರಿನ ಬರಹಗಾರರಿಗೆ ಸ್ಫೂತರ್ಿ ತುಂಬುವ ಮತ್ತು ಅವರ ಅರಿವಿನ ಹರವನ್ನು ಹೆಚ್ಚಿಸುವ ಸಾಹಿತ್ಯ-ಸಂವಾದ ಕಾರ್ಯಕ್ರಮವನ್ನು 'ಈಕವಿ' ತಾಲೂಕಾ ಘಟಕದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಹಮ್ಮಿಕೊಳ್ಳಲಾಗಿತ್ತು. ಹಿರಿಯ ಕವಿ ಡಾ.ಬಿ.ಎ.ಸನದಿಯವರ ಅಧ್ಯಕ್ಷತೆಯಲ್ಲಿ, ಡಾ.ಜಿ.ಎಲ್.ಹೆಗಡೆ, ಡಾ.ಮಹೇಶ ಅಡ್ಕೋಳಿ, ಸುಬ್ರಾಯ ಮತ್ತಿಹಳ್ಳಿ, ಆರ್.ಡಿ.ಹೆಗಡೆ, ಆಲ್ಮನೆಯವರು ಸಂಪನ್ಮೂಲ ವ್ಯಕ್ತಿಗಳಾಗಿ ಸಾಹಿತ್ಯದ ಒಳಹೂರಣಗಳನ್ನು ಬಗೆಬಗೆಯಾಗಿ ಬಗೆದಿಟ್ಟಿದ್ದು ಜಿಲ್ಲೆಯಾದ್ಯಂತ ಆಗಮಿಸಿದ ಸಾಹಿತ್ಯ ಅಧ್ಯಯನಶೀಲರಿಗೆ ಹೊಸ ಚಿಂತನೆಗೆ ದಾರಿಮಾಡಿಕೊಟ್ಟಿತು.
ಕಾವ್ಯ ಬರ್ತಾ ಬರ್ತಾ ಮಿನಿಯಾಗಿ, ಮಿಡಿಯಾಗಿ, ಚುಟುಕಾಗಿ, ಈಗ ಎಸ್ಸೆಮ್ಮೆಸ್ ರೂಪದಲ್ಲಿ ರಾರಾಜಿಸುತ್ತಿದೆ ಮುಂದೇನು ಗತಿ? ಎಂಬ ಕಾಳಜಿ ದತ್ತಗುರು ಕಂಠಿಯವರದ್ದು. ಈ ಅವಸರದ ಬದುಕಿನಲ್ಲಿ ಡಿಮ್ಯಾಂಡ್ ಮತ್ತು ಸಪ್ಲೈ ತತ್ವದಂತೆ ಬರವಣಿಗೆಯ ಓಘವು ಸಾಗುತ್ತಿರುವುದು ತಪ್ಪೇನಲ್ಲ! ಎಂಬ ದಿಟ್ಟ ಪ್ರತಿಕ್ರಿಯೆ. ಛಂದಸ್ಸಿನ ಪ್ರಕಾರ ಕಾವ್ಯ ರಚನೆ ತ್ಯಜಿಸಿ ಮುಕ್ತ ಛಂದಸ್ಸು ಹೊಸ ಪ್ರತಿಮೆಯ ಬೆಳೆಸಿ ಜನರಿಗೆ ಅರ್ಥವಾಗ್ತಾ ಹೋಗ್ತಿದೆ. ಇದರ ಒಟ್ಟೂ ಪರಿಣಾಮವೇನು ಎಂಬ ಪ್ರಶ್ನೆಗೆ 'ಗೇಯ ಗುಣವಿರುವ ಕಾವ್ಯ ಜನಮಾನಸದಲ್ಲಿ ಉಳಿಯುತ್ತದೆ'. ಸರ್ವಜ್ಞನ ತ್ರಿಪದಿಗಳು, ವಚನ ಸಾಹಿತ್ಯ, ಜಾನಪದ ಕಾವ್ಯ ಇಂದಿಗೂ ಉಳಿದಿರುವುದಕ್ಕೆ ಕಾವ್ಯಾಂಶ ಮಾತ್ರವಲ್ಲದೇ ಗೇಯಗುಣವಿರುವುದೇ ಸುಧೀರ್ಘ ಸ್ಮರಣೆಯಲ್ಲಿರಲು ಕಾರಣವೆಂದು ಉದಾಹರಿಸಿದರು. ವನ್ನಳ್ಳಿ ಗಿರಿಯವರ ಸಾಹಿತ್ಯ ಮತ್ತು ಬದುಕು ಬೇರೆ ಬೇರೆಯಾಗಿರಬಲ್ಲವೇ ಎಂಬ ಡಾ.ಶಿವರಾಮ ಕಾರಂತರಾದಿ ಜನಜನಿತವಾದ ಪ್ರಶ್ನೆಗೆ 'ಇಲ್ಲ ಅವು ಒಂದನ್ನು ಬಿಟ್ಟು ಇನ್ನೊಂದಿಲ್ಲ' ಎಂದು ಒಟ್ಟಾಭಿಪ್ರಾಯ ಒಡಮೂಡಿತು.
ತಾನು ಕಳೆದ ಇಪ್ಪತ್ತು ವರ್ಷಗಳಿಂದ ಒಂದು ಒಳ್ಳೆಯ ಕಥೆಯನ್ನು ಬರೆಯಬೇಕೆಂದು ಕೊಂಡಿದ್ದೇನೆ ಅದಿನ್ನೂ ಸಾಧ್ಯವಾಗಿಲ್ಲ ಎಂಬ ಮಾಮರ್ಿಕ ನುಡಿ ಆರ್.ಡಿ.ಹೆಗಡೆ, ಆಲ್ಮನೆಯವರದ್ದು. ಕಥೆ, ಕವಿತೆ ಬರೆದ ತಕ್ಷಣ ತಾವೇ ಸ್ವಯಂ ತೀಮರ್ಾನ ಮಾಡಿ ಅದನ್ನು ಪ್ರಕಟಪಡಿಸುವ ಇರಾದೆ ಇಂದಿನ ಯುವ ಬರಹಗಾರರಿಗಿದೆ. ಹಾಗಾಗಬಾರದು, ಬರೆದು ವರುಷಗಟ್ಟಲೆ ಕಾಯಬೇಕು, ಮತ್ತೆ ಮತ್ತೆ ಓದಬೇಕು, ಅದು ಬಾಲೀಶವೆನಿಸಬಾರದು. ಸಮಾಜದ ಕೈಗೆ ಹೋಗಲು ಯೋಗ್ಯವೆನಿಸಿದಾಗ ಮಾತ್ರ ಪ್ರಕಟಪಡಿಸಬೇಕೆಂದು 'ಕಾವ್ಯ ಬರೆಯುವುದಕ್ಕಿಂತ ಬದುಕುವುದು ದೊಡ್ಡದು' ಎಂದು ಡಾ.ಅಡ್ಕೋಳಿಯವರ ನೇರಮಾತು.
ಕನ್ನಡ ಕಾವ್ಯದ ಇತಿಹಾಸವನ್ನು ಹಲ್ಮಿಡಿ ಶಾಸನದಿಂದ ನವ್ಯ, ನವ್ಯೋತ್ತರ, ದಲಿತ, ಬಂಡಾಯ ಇತ್ಯಾದಿ ಈವತ್ತಿನವರೆಗಿನ ಸಾಹಿತ್ಯ ಪ್ರಕಾರಗಳನ್ನು ಡಾ.ಜಿ.ಎಲ್.ಹೆಗಡೆಯವರು ವಿವರಿಸಿದರು.
ವಿರ್ಮಶಕರು ಹೊಸಬರನ್ನು ನಿರುತ್ಸಾಹ ಗೊಳಿಸುವ ರೀತಿಯಲ್ಲಿ ಮುನ್ನುಡಿಗಳನ್ನು, ವಿಮಶರ್ಾ ಲೇಖನಗಳನ್ನು ಬರೆಯದೇ, ಉತ್ತೇಜನ ಪರ ಲೇಖನಗಳನ್ನು ಬರೆದು ಮಾರ್ಗದರ್ಶನ ಮಾಡಬೇಕೆಂದು ಡಾ.ಸನದಿಯವರು, ಆಲ್ಮನೆಯವರು ಸೂಚಿಸಿದರೆ, ವಿಮಶರ್ೆಯ ಗೊಡವೆಗೆ ಹೋಗದೆ ಸಾಹಿತ್ಯ ರಚನೆಯಲ್ಲಿ ತೊಡಿಗಿಸಿಕೊಂಡರೆ ತಪ್ಪೇನು ಎಂಬುದು ಮತ್ತೀಹಳ್ಳಿಯವರ ವಾದ. ವಿರ್ಮಶಕನು ತನಗನಿಸಿದ್ದು ಸತ್ಯವಾದರೂ ಸೃಜನಶೀಲತೆಯನ್ನು ಕೊಲ್ಲುವಷ್ಟು ಕ್ರೂರ ಶಬ್ದಗಳಲ್ಲಿ ಬರೆಯಬಾರದೆಂದರು. ಅಲ್ಲದೇ ಅವನು ಕಾವ್ಯವನ್ನು ಕೆಡವದೇ ಕಟ್ಟುವ ಕೆಲಸಕ್ಕೆ ಉದಾರ ಮನಸಿನಿಂದ ಕೈ ನೀಡಬೇಕೆಂದು ಕರೆಕೊಟ್ಟರು.
ಸುಬ್ರಾಯ ಮತ್ತಿಹಳ್ಳಿಯವರು, ಮಾತನಾಡುತ್ತಾ ಮನೆ ಭಾಷೆ ಬೇರೆ ಇದ್ದರೂ ಮನದ ಭಾಷೆಯಲ್ಲಿ ಕಾವ್ಯ ಸಾಧನೆಮಾಡಿ ಅಟ್ಟಕ್ಕೇರಿದ ಸನದಿಯವರನ್ನೇ ತೋರಿಸಿ, ಕಾವ್ಯದ ನಿರಂತರ ಸಾಧನೆಗೆ ಸಾಕಷ್ಟು ಪರಿಶ್ರಮ ಮಾಡಬೇಕೆಂದು ಸೂಚಿಸಿದರು.
ಎನ್.ವಿ.ಮಂಜುನಾಥ ಅವರ 'ಕಾವ್ಯದಲ್ಲಿನ ಸಮಕಾಲೀನ ಸಮಸ್ಯೆಗಳಿಗೆ ಪ್ರತಿಕ್ರಿಯೆ ತೋರಿಸಬೇಕೇ ಬೇಡವೇ?' ಎಂಬ ಪ್ರಶ್ನೆಗೆ ಸಂವಾಹದ ಸಮೂಹದಲ್ಲಿದ್ದ ಹಿರಿಯರೆಲ್ಲ ಸಮಕಾಲೀನತೆಯೊಡನೆ ಸಾರ್ವಕಾಲಿಕ ಚಿಂತನೆಯನ್ನು ಕಾವ್ಯದಲ್ಲಿ ಅಳವಡಿಸಿಕೊಂಡರೆ ಅದು ಬಹುಕಾಲ ಬಾಳುತ್ತದೆ ಎಂದು ಅಭಿಪ್ರಾಯಪಟ್ಟರು.
ಕೃಷ್ಣಮೂತರ್ಿ ಹೆಬ್ಬಾರರು ಖಲೀಲ್ ಗಿಬ್ರಾನನ ಒಂದು ಸುಂದರ ಪದ್ಯವನ್ನು ಹಾಡಿ ಕಾವ್ಯದ ಸಾರ್ವಕಾಲಿಕ ಗುಣವನ್ನು ಸಮಥರ್ಿಸಿದರು.
ಖಲೀಲ್ ಗಿಬ್ರಾನನ 'ಇಬ್ಬರು ಕವಿಗಳು' ಎಂಬ ರೂಪಕವನ್ನು ನಿರೂಪಿಸುತ್ತಾ ಸನದಿಯವರು ಅಂದಂದಿನ ಶ್ರೀಸಾಮಾನ್ಯರ ಹೃದಯವನ್ನು ತಟ್ಟುವ ಕಾವ್ಯ ಬಾಯಿಂದ ಬಾಯಿಗೆ ಹರಿದು ಬಹುಕಾಲ ಇರುತ್ತದೆ ಎಂದು ಪ್ರತಿಪಾದಿಸಿದರು. ಅಂತೆಯೇ ಕಾವ್ಯದ ಸ್ಮರಣೀಯ ಅಂಶವು ಮಹತ್ವದ್ದೆಂದೇ ಅವರು ಒತ್ತಿಹೇಳಿದರು.
ಹೊಸ ತಲೆಮಾರಿನ ಕವಿಗಳು ತುಂಬಾ ಉತ್ಸಾಹದಿಂದ ಬರೆಯುತ್ತಿದ್ದು ಕೇವಲ ಉತ್ಸಹವನ್ನೇ ಬಂಡವಾಳವಾಗಿಸಿಕೊಂಡು ಕಾವ್ಯದ ಮೂಲಪಾಠಗಳನ್ನು ಅರಿಯದೇ ಬರೆಯುವ ಕವಿಗಳಿಗೆ ಕೆಲವು ಕಿವಿಮಾತುಗಳನ್ನು ಹೇಳಿದರು. ಎಂ.ಕೆ.ಲಕ್ಷ್ಮಿ ಪುರುಷರ ತುಲನೆಯಲ್ಲಿ ಮಹಿಳಾ ಲೇಖಕಿಯರ ಬರವಣಿಗೆ ಕಡಿಮೆಯಾಗಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು. ಸುಜಾತಾ ದಂಡ್ಕಲ್ ಮಹಿಳೆ ನಿಮರ್ಾಣ ಮಾಡುವ ಒಂದು ಕಲಾಕೃತಿಯನ್ನು ಬೇರೆ ಬೇರೆ ಜನ ಬೇರೆ ಬೇರೆ ರೀತಿಯಲ್ಲಿ ಅಥರ್ೈಸುವುದು ಸಾಧ್ಯವಿದ್ದಂತೆ ಸಾಹಿತ್ಯ ವಿಮಶರ್ೆಯೂ ಕೂಡ ಎಂದರು. ಬುದ್ಧಿಭಾವದ ಹದವಾದ ಮಿಶ್ರಣದಿಂದ ಹುಟ್ಟುವುದು ನಿಜವಾದ ಸಾಹಿತ್ಯವೋ ಇಲ್ಲ ಕೇವಲ ಶಬ್ದಗಳ ಸರ್ಕಸ್ಸೋ! ಎಂಬ ಹಾಸ್ಯಪೂರ್ಣ ವಾದಕ್ಕೆ 'ಒಳ್ಳೆಯ ಕಾವ್ಯಕ್ಕೆ ಬುದ್ಧಿಭಾವಗಳ ಸಮಬೆರಕೆ ಬೇಕೇಬೇಕೆಂದು ತಜ್ಞರು ವಾಖ್ಯಾನ! ಪ್ರಿಯಾ ಕಲ್ಲಬ್ಬೆಯವರು ಹೊಸದಾಗಿ ಬರೆಯುವವರು ಓದಲೇ ಬೇಕಾದ ಪುಸ್ತಕಗಳ ಬಗ್ಗೆ ಸಲಹೆ ಪಡೆದರು. ಸಂವಾದದ ಮೂಲಕ ನೀಡುವ ಸಂದೇಶವೇನೆಂದು ಸಂಧ್ಯಾಭಟ್ ಕೂಜಳ್ಳಿ ನಿರೀಕ್ಷಿಸಿದಾಗ, ಇಂತಹ ಪ್ರಶ್ನೆಗಳನ್ನು ಬಹಳಷ್ಟು ಜನ ಕೇಳುತ್ತಾರೆ, ಬಹಳಷ್ಟು ಸಲ ಮನಸಿಲ್ಲದಿದ್ದರೂ ಹಿರಿಯರು ಉತ್ತರಿಸುತ್ತಾರೆ. ತಮ್ಮ ಅನುಭವಗಳನ್ನು ಸೂಕ್ತ ಶಬ್ಧಗಳಲ್ಲಿ ಅಭಿವ್ಯಕ್ತಗೊಳಿಸುತ್ತಾ ನಿರಂತರ ಪರಿಶ್ರಮ ಪಟ್ಟಾಗ ಮಾತ್ರ ಒಳ್ಳೆ ಬರಹಗಾರರಾಗಿ ರೂಪುಗೊಳ್ಳಲು ಸಾಧ್ಯವಂಬುತ್ತರ ಪಡೆದರು.
ಡಾ.ಸರಸ್ವತಿ ಕಳಸದ ಮತ್ತು ಸುಧಾ ಕಕರ್ಿಸವಲು ಬಾಳಿನಲ್ಲಿ ಕವಿಯುಂಡ ನೋವು, ಕಷ್ಟ-ನಷ್ಟಗಳ ಅನುಭವ ಕಾವ್ಯದಲ್ಲಿ ಮಿಂದೆದ್ದಾಗ ಅದು ಜನಸಾಮಾನ್ಯರ ಎದೆಮೀಟಬಲ್ಲದೆಂದರು.
ಉಳಿದಂತೆ, ಮಂಜುನಾಥ ಗಾಂವಕರ ಬಗರ್ಿ, ಗಣೇಶ ಹೊಸ್ಮನೆ, ಶಿವರಾಮ ಹೆಗಡೆ, ವಿನಾಯಕ ಹೆಗಡೆ ಭದ್ರನ್, ವಿಶ್ವನಾಥ ಸಂಕಸಾಳ, ನವೀನ್ ಭಟ್ ಗಂಗೋತ್ರಿ, ವಿನಾಯಕ ಹೆಗಡೆ ಭದ್ರನ್, ರಾಘವೇಂದ್ರ ಭಟ್, ಸಂಜಯ್ ಭಟ್ ಬೆಣ್ಣೆ, ಪ್ರಕಾಶ ಭಾಗ್ವತ ಮೊದಲಾದವರು ಸಂವಾದದಲ್ಲಿ ಪಾಲ್ಗೊಂಡು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಯಾವುದೇ ವಿಷಯದ ಕುರಿತು ವಾದ ಮಾಡುವುದಕ್ಕಿಂತಲೂ ಸಂವಾದಮಾಡುವುದು ಹೆಚ್ಚು ಆರೋಗ್ಯಕರ. ಚಚರ್ೆ, ಸಂವಾದಮಾಡುವುದರಿಂದ ವಿಷಯವನ್ನು ನಿಖರವಾಗಿ ಅರಿತುಕೊಳ್ಳಲು ಅನುಕೂಲವಾಗುವುದು. ಅನೇಕ ಸಲ ವರಕವಿ ದ.ರಾ.ಬೇಂದ್ರೆ ಹೇಳಿದ ಮಾತನ್ನು ನೆನಪಿಸಿ ದಿನದ ಸಂವಾದ ವಾದವೂ ಆಗದೆ ವಾಗ್ವಾದವೂ ಆಗದೇ ಸಂಪ್ರೀತಿಯ ಸಂವಾದವುದಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾ ಡಾ.ಸನದಿಯವರು ಸಮಾರೋಪದ ಮಾತುಗಳನ್ನಾಡಿದರು.
ಸಂವಾದದ ರಸಗಳಿಘೆಗಳನ್ನು ಆಸ್ವಾದಿಸುವ ಸೌಭಾಗ್ಯ ಸಾಹಿತ್ಯಾಸಕ್ತರಿಗೆ ಒದಗಿ ಬಂದಿರುವುದು ಆ ಮೂಲಕ ಇಂದು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮುಳುಗಿರುವ ಪ್ರತಿಭಾವಂತರಿಗೆ ಅಂತರಜಾಲದಲ್ಲಿ ಸಾಹಿತ್ಯಿಕ ಬ್ಲಾಗ್ ಗಳನ್ನು ರಚಿಸಲು ಪ್ರೇರಣೆ ದೊರಕಿರುವುದು ಈ ಸಂವಾದಲ್ಲಿ ಪ್ರತಿಧ್ವನಿಸಿತು.
ಅಂತರಜಾಲದಲ್ಲಿ ಸಾಹಿತ್ಯ ಕೃಷಿ
ಕುಮಟಾ: ತಾಲೂಕಿನ ಗ್ರಾಮೀಣ ಭಾಗವಾದ ಕಲ್ಲಬ್ಬೆಯಲ್ಲಿ ಚಿಗುರು ಸಾಂಸ್ಕೃತಿಕ ವೇದಿಕೆ ಮತ್ತು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಕಾರದೊಂದಿಗೆ 'ಈಕವಿ' ತಾಲೂಕಾ ಘಟಕದ ಉದ್ಘಾಟನೆ ನೆರವೇರಿತು. ಸುಜಾತಾ ಕೆಶ್ಯೂ ಇಂಡಸ್ಟ್ರೀಸ್ ಮಾಲಕರಾದ ಸುಬ್ರಾಯ ಭಟ್ ದೀಪಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ತಮ್ಮ ಹಳ್ಳಿಯಲ್ಲಿ ನಡೆಯುವ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಲಯ ಪರಿಷತ್ತು ಮೂರೂರಿನಿಂದ ಎಲ್ಲ ರೀತಿಯ ಸಹಾಯ ನೀಡುವುದಾಗಿ ಘೋಷಿಸಿದರು. ಈಕವಿಯ ಸಂಸ್ಥಾಪಕ ಅಧ್ಯಕ್ಷರಾದ ವಿ.ಎಂ.ಕುಮಾರಸ್ವಾಮಿಯವರ ಸಾಹಸವನ್ನು ಕೊಂಡಾಡುತ್ತಾ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಎ.ವಿ.ಬಾಳಿಗಾ ಕಾಲೇಜಿನ ಪ್ರಾಚಾರ್ಯರಾದ ವಿಶ್ವನಾಥ ಹಂಪಿಹೊಳಿಯವರು ಕನ್ನಡ ಕಟ್ಟುವ ಕಾರ್ಯಕ್ಕೆ ಕೈಜೋಡಿಸಬೇಕಾದ ತುತರ್ುಅಗತ್ಯವನ್ನು ಪ್ರಸ್ತಾಪಿಸಿದರು. 'ಈಕವಿ' ಜಿಲ್ಲಾ ಸಂಚಾಲಕ, ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಆರ್.ಗಜು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಇಂದು ತುಂಬು ಪ್ರತಿಭಾವಂತರು ಸಾಹಿತ್ಯ ಕೃಷಿಯಿಂದ ದೂರ ಸರಿಯದಂತೆ ಅಂತರಜಾಲ ಅವರನ್ನು ಆಕಷರ್ಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಈಕವಿಯ ಕುರಿತು ಘಟಕದ ಅಧ್ಯಕ್ಷೆ ಪ್ರಿಯಾ ಭಟ್ ಕಲ್ಲಬ್ಬೆ ಪ್ರಾಸ್ತಾವಿಕ ಮಾತುಗಳನಾಡಿದರು. ವೇದಿಕೆಯ ಮೇಲೆ ಸಾಹಿತ್ಯ ಸಂವಾದದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ಜಿ.ಎಲ್.ಹೆಗಡೆ, ಡಾ.ಮಹೇಶ ಅಡ್ಕೋಳಿ, ಸುಬ್ರಾಯ ಮತ್ತಿಹಳ್ಳಿ, ಆರ್.ಡಿ.ಹೆಗಡೆ ಆಲ್ಮನೆ, ಕೃಷ್ಣಮೂತರ್ಿ ಹೆಬ್ಬಾರ ಉಪಸ್ಥಿತರಿದ್ದರು. ಜಿಲ್ಲೆಯಾದ್ಯಂತ ಬಂದ ಇಪ್ಪತ್ತಕ್ಕೂ ಹೆಚ್ಚು ಹೊಸ ತಲೆಮಾರಿನ ಯುವ ಬರಹಗಾರರು ಸಂವಾದದಲ್ಲಿ ಭಾಗವಹಿಸಿ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ತದನಂತರ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು. ರಾಘವೇಂದ್ರ ಭಟ್ ನಿರೂಪಿಸಿದರು. ಸರಸ್ವತಿ ಜೋಷಿ ಸ್ವಾಗತಿಸಿದರು. ಈಕವಿಯ ಕೋಶಾಧ್ಯಕ್ಷ ಎಂ.ಆಯ್.ಭಟ್ ವಂದಿಸಿದರು.
+++++++++++++++++++++++++++++++++++++++++++++++++++++++++++++++++++
Udghatane.mpg kumta ekavi taalooka program at kallabbe, kumta
http://www.youtube.com/watch?v=2NOxTJEOha4&feature=mfu_in_order&list=UL
Hampholi.mpg Dr. Vishwanaath Hampiholi yavara maatu
http://www.youtube.com/watch?v=S1xa1Ha7gXY&list=UL3OtAbqX887Q&playnext=1
G.LHegde.mpg Dr. G. L. Hegde yavara maatu
http://www.youtube.com/watch?v=ProSI0xsYog&list=UL3OtAbqX887Q&playnext=2
++++++++++++++++++++++++++++++++++++++++++++++++++++++++++++++++++++++
kumta taaluka ekavi udgatana samaarambha
http://picasaweb.google.com/bmsceiaa/KumtaTaalukaEkaviUdgatanaSamaarambha#
kallabbe e kavi kaaryakrama
http://picasaweb.google.com/bmsceiaa/KallabbeEKaviKaaryakrama#
+++++++++++++++++++++++++++++++++++++++++++++++++++++++++++++++++++++
No comments:
Post a Comment